About Us
साहित्यसंगीतकलाविहीनः साक्षात्पशुः पुच्छविषाणहीनः । तृणं न खादन्नपि जीवमानस्तद्भागधेयं परमं पशूनाम्
ಸಾಹಿತ್ಯ ಸಂಗೀತ ಮುಂತಾದ ಯಾವುದೇ ಕಲೆಗಳ ಗಂಧಗಾಳಿ ಇಲ್ಲದವರು ಸಾಕ್ಷಾತ್ ಪಶುವಿಗೆ ಸಮಾನ ಎಂದು ಈ ಸುಭಾಷಿತ ಹೇಳುತ್ತದೆ. ಅದರಲ್ಲೂ ಸಾಹಿತಿಗಳು, ಕವಿಗಳು ಬ್ರಹ್ಮನ ಆದ್ಯಸೃಷ್ಟಿ ಎನ್ನುತ್ತಾರೆ ತಿಳಿದವರು. ಸರಸ್ವತಿಪುತ್ರರಿಗೆ ಯಾಕಿಷ್ಟು ಆದರ.. ಏಕೆಂದರೆ ಖರ್ಚು ಮಾಡಿದಷ್ಟೂ ಬೆಳೆಯುತ್ತಾ ಹೋಗುವ ಸರಸ್ವತಿಯ ಕೋಶದ ಒಡೆಯರವರು. ಲೇಖನಿಯಿಂದ ಹರಿದುಬಂದ ಭಾವಗಳು ಎಷ್ಟೇ ಕ್ಲೇಶವಾಗಿದ್ದರೂ, ಓದುಗನ ಆ ಮನಸ್ಸನ್ನು ತೊಳೆದು ಆಹ್ಲಾದ ಉಂಟುಮಾಡುವ ಅಲೌಕಿಕ ಶಕ್ತಿಯ ಸಾಧನಗಳು. ಅದಕ್ಕೇ ಒಬ್ಬ ಲೇಖಕನನ್ನು ಶಬ್ದ ಬ್ರಹ್ಮ ಎಂದು ಕರೆಯುವರು. ಪ್ರಸ್ತುತ ಪರಿಸ್ಥಿತಿ ಹೇಗಾಗುತ್ತಿದೆಯೆಂದರೆ ಮುಂದಿನ ದಿನಗಳಲ್ಲಿ ಓದುಗರ ಬರ ಕನ್ನಡ ಸಾಹಿತ್ಯಕ್ಕೆ ಕಾಡಲಿದೆಯೇನೋ ಎಂಬ ಭಯ ಕಾಡುತ್ತಿದೆ. ಬರಹಗಾರನೊಬ್ಬನ ಬಲ, ಸಹೃದಯಿ, ರಸಿಕ ಓದುಗರು. ಅವರೇ ಇಲ್ಲದ ಮೇಲೆ ಬರಹಗಾರನಿಗೇನು ಕೆಲಸ. ತನ್ನ ಭಾವನೆಗಳನ್ನು ನಗುವಿನಲ್ಲೋ ಅಳುವಿನಲ್ಲೋ ಹೊರಡಿಸಿ ಸುಮ್ಮನಾಗಿಬಿಡುತ್ತಾನೆ ಇನ್ನು ಮುಂದೆ ಆತ. ಅದರೊಟ್ಟಿಗೆ ಸಾಹಿತ್ಯಲೋಕದ ವಾಣಿಜ್ಯೀಕರಣ, ಸಾಹಿತಿಗಳ ನಡುವೆ ಅಸಹಜ ಮತ್ತು ಅನಾರೋಗ್ಯಕರ ಸ್ಪರ್ಧೆಗಳು ಎಲ್ಲವೂ ಸೇರಿ ಲೇಖನಿ ಹಿಡಿದ ಕೈಗಳನ್ನು ತಡೆಯುತ್ತಿವೆ.
ಇಂತಹ ಪರಿಸ್ಥಿತಿಯಲ್ಲಿ ವೃಕೋದರ ಹೆಸರಿನಿಂದ ಶ್ರೀಯುತ ಸಂಮ್ಮೋದ ವಾಡಪ್ಪಿಯವರ ಪ್ರಕಾಶನ ಮತ್ತು ಈ ಜಾಲತಾಣ ಸಾಹಿತ್ಯಸೇವೆಗೆ ಮುಂದಾಗಿದೆ. ಸ್ವತಃ ಕವಿಯಾಗಿರುವ ಸಂಮ್ಮೋದರವರು ತಮ್ಮ ಅಜ್ಜ ದಿ|| ಶ್ರೀಯುತ ಬಿ. ಆರ್. ವಾಡಪ್ಪಿಯವರ ನೆನಪಿನಲ್ಲಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಸಾಹಿತ್ಯಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಲೇಖಕರ ಎಲ್ಲಾ ಪ್ರಕಾರಗಳ ವಿವಿಧ ರಚನೆಗಳನ್ನು ತಮ್ಮ ಜಾಲತಾಣದಲ್ಲಿ ಪ್ರಕಟಿಸುವ ಯೋಜನೆ ಹಾಕಿಕೊಂಡಿದ್ದಾರೆ. ತನ್ಮೂಲಕ ಬರಹಗಾರರಿಗೆ ಪ್ರೊತ್ಸಾಹ ಹಾಗೂ ಓದುಗರಿಗೆ ರಸದೌತಣ ಬಡಿಸುವ ಮಹಾನ್ ಅಭಿಲಾಷೆ ಅವರದು.
ವೃಕೋದರ ಪ್ರಕಾಶನ – ಬರಹಗಾರರ, ಓದುಗರ, ವಿಚಾರಗೊಷ್ಠಿಗಳ, ಸಮಾಲೋಚನೆಗಳ, ಸದಭಿರುಚಿಯ ಒಂದು ವಿಶಿಷ್ಠ ವೇದಿಕೆ. ಇದು ಅವಕಾಶಗಳನ್ನು ಲೇಖಕರಿಗೆ ನೀಡುವ ಒಂದು ರಹದಾರಿ ಎನ್ನಬಹುದು. ಸೃಜನಾತ್ಮಕತೆಗೆ, ಅಭಿರುಚಿಯನ್ನು, ತಮ್ಮ ಮನದ ಭಾವಗಳನ್ನು ಗೀಚಿ ಅದನ್ನು ಪ್ರಕಟಿಸದೇ ಅಡಗಿಸಿ ಇಟ್ಟಂತಹ ಅನೇಕರಿಗೆ ವಿಶ‍್ವಾಸ ಮೂಡಿಸುವ ದೃಷ್ಟಿ ಕೋನವನ್ನು ಇಟ್ಟುಕೊಂಡು ಈ ಪ್ರಕಾಶನವನ್ನು ಆರಂಭಿಸಲಾಗಿದೆ. ಈಗ ಅನೇಕ ವೇದಿಕೆಗಳು, ಸಾಮಾಜಿಕ ಜಾಲತಾಣದ ಗುಂಪುಗಳು, ಸಹೃದಯ, ಸಮಾನ ಮನಸ್ಸಿನ ಆಯಾ ಗುಂಪುಗಳು ಪ್ರಸ್ತುತ ಇವೆ. ಅವುಗಳ ಮಧ್ಯೆ ಒಂದು ವಿಶಿಷ್ಟವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರೀ ಪ್ರಕಟಣೆಗಾಗಿ ಸೀಮಿತವಾಗಿಡದೆ, ಓದುಗರ ಕೂಟ, ವಿಚಾರ ಸಂಕೀರ್ಣ, ಸಾಂಸ್ಕೃತಿಕ ಕಾರ್ಯಕ್ರಮ, ಕನ್ನಡ ಕಲಿಕೆ, ವಿಮರ್ಶೆ, ಅನಿಸಿಕೆಗಳನ್ನು ಕೂಡಿಸುವುದು, ಸಂಪಾದಕ ಕೃತಿಗಳನ್ನು ಹೊರ ತರುವುದು, ಈ ಬುಕ್ (e-book) ಗಳನ್ನು, ಆಡಿಯೋ ಬುಕ್ ಗಳನ್ನು ಹೊರತರುವುದು, ಅನೇಕ ಉತ್ತಮ ಕೃತಿಗಳ ಬಗ್ಗೆ ಚರ್ಚಾ ಕೂಟಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೀಗೆ ಉತ್ತಮ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ವೇದಿಕೆ ಈ ವೃಕೋದರ ಪ್ರಕಾಶನ.
Contact Us
Vrikodara Prakashana
#17, 11th Cross, Veerasagara main road,
Attur Layout, Yelahanka
Bengaluru, Karnataka, INDIA - 560064
Call Us :
+91 9008142664
Email Us :
